ಶ್ರೀನಿವಾಸರಾವ ಕೊರಟಿಯವರು |ಅಕ್ಟೋಬರ ೧೯೨೫ರಲ್ಲಿ ಹೊಸಕೋಟೆ ತಾಲೂಕಿನ ಕೊರಟಿ ಗ್ರಾಮದಲ್ಲಿ ಜನಿಸಿದರು. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಇವರು ಪ್ರಾಧ್ಯಾಪಕರಾಗಿದ್ದರು. ಶ್ರೀನಿವಾಸರಾವ ಕೊರಟಿಯವರು ವಿಜಯನಗರದ ಹಿನ್ನೆಲೆಯ ಸುಮಾರು ೨೦ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಕಾದಂಬರಿಗಳು ತೆಲುಗು ಭಾಷೆಗೂ ಅನುವಾದಗೊಂಡಿವೆ. ಇದಲ್ಲದೆ ಇವರು ಸಾಮಾಜಿಕ ಕಾದಂಬರಿಗಳನ್ನೂ ರಚಿಸಿದ್ದು ಅವುಗಳಲ್ಲಿ “ಮಿಸ್ ಲೀಲಾವತಿ” ಬಹಳ ಜನಪ್ರಿಯವಾದ ಕಾದಂಬರಿ. ದಾಸಸಾಹಿತ್ಯದ ಬಗೆಗೂ ಸಂಶೋಧನೆ ಮಾಡಿದ ಕೊರಟಿಯವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಕೊರಟಿಯವರು ಕೆಲವು ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಪತ್ರಿಕೆಯಾದ ಕನ್ನಡ ನುಡಿಯ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು. == ಕೃತಿಗಳು == === ಕಾದಂಬರಿ === ಮಿಸ್ ಲೀಲಾವತಿ ಗೃಹಿಣಿ ಹೆಣ್ಣಿನ ಹುಚ್ಚು ನಿರಂಜನಿ ಗುಣವಂತಿ ಲಕ್ಷ್ಮಿ ದೊಂಬರ ಚೆಲುವೆ ಸೂಳೆಯ ಕೆರೆ ಪರಮೇಶ್ವರ ಪುಲಿಕೇಶಿ ಉಭಯ ಲೋಕೇಶ್ವರ ರಾಮರಾಯನ ತಲೆ ದೇವಗಿರಿ ದುರ್ಗ (ಸಾಹಿತ್ಯ ಭಂಡಾರ ಪ್ರಕಾಶನ) ದೇವಗಿರಿ ಪತನ (ಸಾಹಿತ್ಯ ಭಂಡಾರ ಪ್ರಕಾಶನ) ಕನ್ನಡಿಗರ ಕಾಳರಾತ್ರಿ (ಸಾಹಿತ್ಯ ಭಂಡಾರ ಪ್ರಕಾಶನ) ಕುಮಾರರಾಮ (ಸಾಹಿತ್ಯ ಭಂಡಾರ ಪ್ರಕಾಶನ) ರಾಜ್ಯೋದಯ (ಸಾಹಿತ್ಯ ಭಂಡಾರ ಪ್ರಕಾಶನ) ರಾಯ ಪರಾಭವ (ಸಾಹಿತ್ಯ ಭಂಡಾರ ಪ್ರಕಾಶನ) ಗಜಬೇಂಟೆಗಾರ (ಸಾಹಿತ್ಯ ಭಂಡಾರ ಪ್ರಕಾಶನ) ರಾಜ್ಯಕ್ರಾಂತಿ (ಸಾಹಿತ್ಯ ಭಂಡಾರ ಪ್ರಕಾಶನ) ತೌಳವೇಶ್ವರ (ಸಾಹಿತ್ಯ ಭಂಡಾರ ಪ್ರಕಾಶನ) ನಾಗಲಾದೇವಿ (ಸಾಹಿತ್ಯ ಭಂಡಾರ ಪ್ರಕಾಶನ) ಜಗನ್ಮೋಹಿನಿ (ಸಾಹಿತ್ಯ ಭಂಡಾರ ಪ್ರಕಾಶನ) ಶಾಂತಿವಾದಿ (ಸಾಹಿತ್ಯ ಭಂಡಾರ ಪ್ರಕಾಶನ) ರಾಜದ್ರೋಹಿ (ಸಾಹಿತ್ಯ ಭಂಡಾರ ಪ್ರಕಾಶನ) ಅಮಾತ್ಯರತ್ನ (ಸಾಹಿತ್ಯ ಭಂಡಾರ ಪ್ರಕಾಶನ) ಹುಚ್ಚುದೊರೆ (ಸಾಹಿತ್ಯ ಭಂಡಾರ ಪ್ರಕಾಶನ) ರಕ್ಕಸತಂಗಡಿ (ಸಾಹಿತ್ಯ ಭಂಡಾರ ಪ್ರಕಾಶನ) ರಘುನಾಥ ವಿಜಯ (ಸಾಹಿತ್ಯ ಭಂಡಾರ ಪ್ರಕಾಶನ) ದೇವಿಕೋಟೆ (ಸಾಹಿತ್ಯ ಭಂಡಾರ ಪ್ರಕಾಶನ) ಜಾತಿಕಲಹ (ಸಾಹಿತ್ಯ ಭಂಡಾರ ಪ್ರಕಾಶನ) ರಾಜ್ಯಕ್ಷಯ (ಸಾಹಿತ್ಯ ಭಂಡಾರ ಪ್ರಕಾಶನ) === ಕಥಾಸಂಕಲನ === ಚಾರಿತ್ರಿಕ ಕಥಾಮಂಜರಿ === ದಾಸ ಸಾಹಿತ್ಯ === ಶ್ರೀ ವಾದಿರಾಜರು ಶ್ರೀ ಜಯತೀರ್ಥರು ಶ್ರೀ ಪುರಂದರದಾಸರು === ಬಾಲಸಾಹಿತ್ಯ === ಶಿವಪ್ಪ ನಾಯಕ ನೃಪತುಂಗ ವಿದ್ಯಾರಣ್ಯರು ಮುಂಡರಗಿ ಭೀಮರಾಯರು ಕಿತ್ತೂರ ಚೆನ್ನಮ್ಮ == ಚಿತ್ರೀಕರಣ == ಕೊರಟಿಯವರ ಎರಡು ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿ ಬಹಳ ಯಶಸ್ಸು ಪಡೆದವು. ಮಿಸ್ ಲೀಲಾವತಿ ಗೃಹಿಣಿ ಮಿಸ್ ಲೀಲಾವತಿ ಚಲನಚಿತ್ರದಲ್ಲಿ ‘ಅಭಿನಯ ಶಾರದೆ’ ಎಂದು ಬಿರುದು ಪಡೆದಿರುವ ಜಯಂತಿ ಯವರು ಹಾಗು ಕುಮಾರತ್ರಯರಲ್ಲಿ ಒಬ್ಬರಾದ ಉದಯಕುಮಾರರವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕುವೆಂಪುರವರು ರಚಿಸಿದ ‘ದೋಣಿ ಸಾಗಲಿ ಮುಂದೆ ಹೋಗಲಿ..’ ಗೀತೆಯು ಈ ಚಲನಚಿತ್ರದ ಅತ್ಯಂತ ಸುಶ್ರಾವ್ಯ ಗೀತೆಯಾಗಿದೆ. ಶ್ರೀನಿವಾಸರಾವ ಕೊರಟಿಯವರು ೧೯೮೩ ಎಪ್ರಿಲದಲ್ಲಿ ತೀರಿಕೊಂಡರು. == ಹೊರಗಿನ ಕೊಂಡಿಗಳು == ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ತಾಣದಲ್ಲಿ ಸಿಗುವ ಪುಸ್ತಕಗಳು